ತರಂಗಿಣಿ ಯಕ್ಷೋತ್ಸವ 2023
Monday, April 8th, 2024ದಿ: 01-10-2023 ರಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ “ತರಂಗಿಣಿ ಯಕ್ಷೋತ್ಸವ 2023” ಕಾರ್ಯಕ್ರಮ ನೆರವೇರಿತು. ರಾಜೇಶ ಉಪಾಧ್ಯಾಯ ಮತ್ತು ಶೈಲೇಂದ್ರ ಉಪಾಧ್ಯಾಯ ಇವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರಸಂಗಗಳು ಅತ್ಯುತ್ತಮವಾಗಿ ಮೂಡಿ ಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಈ ಕಾರ್ಯಕ್ರಮವು ಯಶಸ್ವಿಯಾಗಲು ಕಾರಣೀಭೂತರಾದ ತರಂಗಿಣಿ ಮಿತ್ರಮಂಡಳಿಯ ಸರ್ವ ಸದಸ್ಯರಿಗೂ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ, ತನು-ಮನ-ಧನಗಳಿಂದ ಸಹಕರಿಸಿದ ಸರ್ವರಿಗೂ ಸಂಘದ ಪರವಾಗಿ ಅನಂತಾನಂತ ಧನ್ಯವಾದಗಳು.