ಭಗವಂತನು ಎಲ್ಲರನ್ನು ಹರಸಿ ಕಾಪಾಡಲಿ..
ಶ್ರೀ ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಇದು ನಮ್ಮ ಹಿಂದೂ ಧರ್ಮದ ಪವಿತ್ರ, ಶ್ರೇಷ್ಠ ಮತ್ತು ಬಹಳ ಸಾಮಾನ್ಯವಾಗಿ ಪಠಿಸುವ ಸ್ತೋತ್ರ . ಸಹಸ್ರ ಎಂದರೆ ಸಾವಿರ ಎಂದರ್ಥ. ವಿಷ್ಣುಸಹಸ್ರನಾಮದಲ್ಲಿ ವಿಷ್ಣುವಿನ 1000 ನಾಮಗಳಿವೆ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಮಹಾಭಾರತದ ಯುದ್ಧ ಆದ ಮೇಲೆ ಭೀಷ್ಮನು ಮರಣಶಯ್ಯೆ ಯಲ್ಲಿ ಇರುವಾಗ ಯುಧಿಷ್ಟಿರನು ಅವರನ್ನು ಧರ್ಮ ಪ್ರಶ್ನೆಗಳ ಉತ್ತರ ಕೇಳುತ್ತಾನೆ. ಭೀಷ್ಮರು ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಶ್ರೀ ಶಂಕರಾಚಾರ್ಯರು, ಪರಾಶರ ಭಟ್ಟರು, ಮಧ್ವಾಚಾರ್ಯರು, ಮುಂತಾದವರು ಇದಕ್ಕೆ ತಮ್ಮದೇ ರೀತಿಯಲ್ಲಿ ಭಾಷ್ಯ ಬರೆದಿದ್ದಾರೆ. ಈ ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ.
July 5th, 2015 at 6:34 pm
wel job by us….