ಪಂಚತ್ರಿಂಶತ್ತಮ ವರ್ಷೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ
ಪಂಚತ್ರಿಂಶತ್ತಮ ವರ್ಷೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ
35 ನೇ ವರ್ಷಾಚರಣೆಯ ಹೊಸ್ತಿಲಲ್ಲಿರುವ ತರಂಗಿಣಿ ಮಿತ್ರಮಂಡಳಿಯ “ಪಂಚತ್ರಿಂಶತ್ತಮ ವರ್ಷೋತ್ಸವ” ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸೆ 03, 2023ರ ಭಾನುವಾರ ಬಿಡುಗಡೆ ಗೊಳಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಯಾದ ಉದ್ಯಮಿ ಅನಂತರಾಜ್ ಪಡುಬಿದ್ರಿ ಇವರು
ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷರಾದ ಪಿ ಸುಧಾಕರ್ ರಾವ್, ಅಧ್ಯಕ್ಷ ರಮಾಕಾಂತ್ ರಾವ್, ಸಂಚಾಲಕ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಸಂಘದ ಹಿರಿಯ ಸದಸ್ಯರಾದ ಸದಾಶಿವ ಆಚಾರ್, ಚಂದ್ರಶೇಖರ್ ರಾವ್ ಮೊದಲಾದವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿ ಮಾತನಾಡಿ, ಸಮಾರಂಭವು ಯಶಸ್ವಿಯಾಗಿ ನಡೆಯಲು ಎಲ್ಲರ ಸಹಭಾಗಿತ್ವ, ಸಹಕಾರ ಅತೀ ಅಗತ್ಯ ಎಂದರು.
ಸಂಘದ ಕಾರ್ಯದರ್ಶಿ ವೈ ಗಣೇಶ್ ರಾವ್, ಕೋಶಾಧಿಕಾರಿ ಗೋವಿಂದ ರಾವ್, ಮುರುಡಿ ಹರಿಕೃಷ್ಣ ರಾವ್, ರಾಜೇಶ ಉಪಾಧ್ಯಾಯ, ಯಾದವೇಂದ್ರ ಉಪಾಧ್ಯಾಯ, ವಿ ನಾರಾಯಣ್ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸುದರ್ಶನ ರಾವ್ ಕಾರ್ಯಕ್ರಮವನ್ನು ನಿರೂಪಿಸಿದರು.