ದಿ. 25-9-2022 ರಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದ ತರಂಗಿಣಿ ಯಕ್ಷೋತ್ಸವ 2022 ಕಾರ್ಯಕ್ರಮದಲ್ಲಿ ಯಕ್ಷಗಾನ ದಿಗ್ಗಜರಾದ ದಿನೇಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ, ವೇಣೂರು ಸದಾಶಿವ ಕುಲಾಲ್, ವೇ.ಮೂ. ಪಾವಂಜೆ ಕೃಷ್ಣ ಭಟ್, ಪಡುಬಿದ್ರಿ ಮೆಸ್ಕಾಂ ಉದ್ಯೋಗಿ ಗಣೇಶ ಕಂಚಿನಡ್ಕ ಇವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ 16 ಆಶಾ ಕಾರ್ಯಕರ್ತೆಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗಯೇ, ದಿ|| ಬಲಿಪ ಪ್ರಸಾದ ಭಟ್ ಇವರ ಕುಟುಂಬಸ್ಥರಿಗೆ ಸಹಾಯಾರ್ಥವಾಗಿ 1 ಲಕ್ಷ ರೂ,ವನ್ನು ಹಸ್ತಾಂತರಿಸಲಾಯಿತು. ತರಂಗಿಣಿಯ ಅಧ್ಯಕ್ಷ ರಮಾಕಾಂತ ರಾವ್, ಹಿರಿಯ ಸದಸ್ಯರಾದ ಸುಧಾಕರ್ ರಾವ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಚಂದ್ರಶೇಖರ ರಾವ್, ಲಕ್ಷ್ಮಿಕಾಂತ ರಾವ್, ರಾಜೇಶ ಉಪಾಧ್ಯಾಯ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೈಲೇಂದ್ರ ಉಪಾಧ್ಯಾಯ ಕಾರ್ಯಕ್ರಮವನ್ನು ನಿರೂಪಿಸಿದರು.