ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ ಗಂ. 6.50ಕ್ಕೆ ಸರಿಯಾಗಿ ಪೋತ ಮನೆಯ ವಠಾರದಲ್ಲಿ ತರಂಗಿಣಿ ಮಿತ್ರಮಂಡಳಿ ವತಿಯಿಂದ ಧ್ವಜಾರೋಹಣ ನಡೆಸಲಾಯಿತು. ನಂತರ ನಡೆದ ತಿರಂಗಾ ಯಾತ್ರೆಯಲ್ಲಿ ಸಂಘದ ಸದಸ್ಯರು, ದೇಶಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.