ಸಹಾಯ ಹಸ್ತ
ಗಣಪತಿ ಪ್ರೌಢ ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘ ಪಡುಬಿದ್ರಿ , ನವಶಕ್ತಿ ಮಹಿಳಾ ಭಜನಾ ಮಂಡಳಿ ಮತ್ತು ವಿಮೆನ್ಸ್ ವೆಲ್ಫೇರ್ ಸೊಸೈಟಿ ಹಾಗೂ ತರಂಗಿಣಿ ಮಿತ್ರಮಂಡಳಿ (ರಿ) ಪಡುಬಿದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾ | 17-07-2021 ನೇ ಶನಿವಾರದಂದು ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಣಪತಿ ಪ್ರೌಢಶಾಲೆಗಳ ಆಯ್ದ 50 ವಿದ್ಯಾರ್ಥಿಗಳ ಪೋಷಕರಿಗೆ ಆಹಾರ ಧಾನ್ಯ ಮತ್ತು ಅಗತ್ಯ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್19 ಗೆ ಅಗತ್ಯವಿರುವ ಔಷಧ ಮತ್ತು ಇತರ ಪರಿಕರಗಳನ್ನು ಅರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳ ಮುಖೇನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಜ್ಶತೆಯನ್ನು ಗಣಪತಿ ಪ್ರೌಢ ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಶ್ರೀ ಕೆ ಅನಂತ ಪಟ್ಟಾಭಿರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೈದ್ಯಾಧಿಕಾರಿ ಡಾ| ರಾಜಶ್ರೀ ಕಿಣಿ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ನ ಉಡುಪಿ ಜಿಲ್ಲಾಧ್ಯಕ್ಷ ಶ್ರೀ ಪಿ ವಿಷ್ಣುಮೂರ್ತಿ ಆಚಾರ್ಯ , ತರಂಗಿಣಿ ಮಿತ್ರಮಂಡಳಿಯ ಗೌರವಾಧ್ಯಕ್ಷ ಶ್ರೀ ಪಿ ಕೆ ರಾಮಚಂದ್ರ ರಾವ್ ಆಗಮಿಸಿದ್ದರು.
ಸರ್ವ ಶ್ರೀ ಶ್ರೀ ಗಣಪತಿ ಭಟ್ (ಮುಖ್ಯೋಪಾಧ್ಯಾಯರು ಗಣಪತಿ ಪ್ರೌಢಶಾಲೆ ), ಶ್ರೀಮತಿ ಸುಮತಿ ಹೆಗ್ಡೆ ( ಮುಖ್ಯೋಪಾಧ್ಯಾಯಿನಿ, SBVP ಹಿರಿಯ ಪ್ರಾಥಮಿಕ ಶಾಲೆ.), ಪೂರ್ಣಿಮಾ ಆಚಾರ್ಯ, ಮುರುಡಿ ಜಗದೀಶ ರಾವ್ ಮತ್ತು ಮುರುಡಿ ಹರಿಕೃಷ್ಣ ರಾವ್ ಉಪಸ್ಥಿತರಿದ್ದರು.
ತರಂಗಿಣಿಯ ಭೂತ ಪೂರ್ವ ಅಧ್ಯಕ್ಷ ಶ್ರೀ ಶ್ರೀಧರ ಆಚಾರ್ಯರು ಕಾರ್ಯಕ್ರಮನ್ನು ನಿರೂಪಿಸಿದರು. ನವಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಧಾ ಆರ್ ನಾವಡ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಪಿ.ರಮಾಕಾಂತ ರಾವ್ ಪ್ರಾಸ್ತಾವಿಕ ಭಾಷಣಗೈದರು. ಶ್ರೀಮತಿ ಕಸ್ತೂರಿ ಆಚಾರ್ಯ ವಂದನಾರ್ಪಣೆಗೈದರು.