ನಮ್ಮ ತರಂಗಿಣಿ ಮಿತ್ರಮಂಡಳಿಯ ಸದಸ್ಯ ಶ್ರೀ ಜಯಂತ್ P. H. ಹಾಗೂ ಶ್ರೀಮತಿ ಸ್ಮಿತಾ ಜಯಂತ್ ಇವರ ಸುಪುತ್ರ ಉಡುಪಿ ಪೂರ್ಣಪ್ರಜ್ಞ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಪಡುಬಿದ್ರಿ ಮದ್ವನಗರದ ಹೆಮ್ಮೆಯ ಸುಪುತ್ರ ಶ್ರೀ ರಂಜಿತ್ P J ಇವರು ಭರತನಾಟ್ಯ, ಯಕ್ಷಗಾನ, NSS, ಹೀಗೆ ಹಲವು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಶೋಭಾಯಾತ್ರೆ ಹಾಗೂ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದವರಲ್ಲಿ ಒಬ್ಬರಾಗಿ, ಅದರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಘನ ಉಪಸ್ಥಿತಿಯಲ್ಲಿ ತನ್ನ ಅದ್ಭುತವಾದ ಭರತನಾಟ್ಯ ಪ್ರದರ್ಶನ ಹಾಗೂ ಕ್ರೀಡಾ ಮಂತ್ರಿಯವರ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೀಡಿ ನಮ್ಮ ರಾಜ್ಯಕ್ಕೆ ಗೌರವವನ್ನು ತಂದಿರುತ್ತಾರೆ. ಸ್ವಗ್ರಾಮಕ್ಕೆ ಆಗಮಿಸಿದ ಇವರಿಗೆ ಮಂಡಳಿಯ ವತಿಯಿಂದ ಅಭಿನಂದನಾ ಪೂರ್ವಕ ಸನ್ಮಾನವನ್ನು ತಾl 4-02-2021 ನೇ ಗುರುವಾರದಂದು ಮದ್ವನಗರದ ಅಮರೇಂದ್ರ ಆಚಾರ್ಯರ ಮನೆಯಲ್ಲಿ ನರವೇರಿಸಿ ಗೌರವಿಸಲಾಯಿತು.