ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 2021
ತರಂಗಿಣಿ ಮಿತ್ರಮಂಡಳಿ(ರಿ) ಮಧ್ವನಗರ ಪಡುಬಿದ್ರಿ, ಇದರ 2021ನೇ ಸಾಲಿನ ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿ.26-9-21ರಂದು ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅನಂತ್ ರಾಜ್ ಪಡುಬಿದ್ರಿ (ಅಧ್ಯಕ್ಷರು ಶಿವಳ್ಳಿ ತುಳು ಅಂತರಾಷ್ಟ್ರೀಯ ವಿಪ್ರ ಪರಿವಾರ (ರಿ) ಬೆಂಗಳೂರು.) ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೋ. Dr. ರಾಘವೇಂದ್ರ ರಾವ್ (ಪ್ರಾಂಶುಪಾಲರು ಪಿ.ಪಿ.ಸಿ ಉಡುಪಿ), ಶ್ರೀ ವಿಷ್ಣು ಪಾಡಿಗಾರ್ (ಅಧ್ಯಕ್ಷರು ಯುವ ಬ್ರಾಹ್ಮಣ ಪರಿಷತ್, ಉಡುಪಿ), ಶ್ರೀ ಕುಮಾರ್ ಉಡುಪ (ಜಿ.ಎಮ್, ಉಡುಪಿ ಟೌನ್ ಕೋ-ಆಪ್ ಬ್ಯಾಂಕ್ ಲಿ. ಉಡುಪಿ) ಆಗಮಿಸಿಧ್ಧರು.
ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀ ರಮಾಕಾಂತ್ ರಾವ್ ಇವರು ಪ್ರಾಸ್ತಾವಿಕ ಭಾಷಣಗೈದರು. ಪ್ರ ಕಾರ್ಯದರ್ಶಿಗಳಾದ ಶ್ರೀ ಹರಿಕೃಷ್ಣ ರಾವ್ ಇವರು ವರದಿ ವಾಚಿಸಿದರು. ತರಂಗಿಣಿಯ ಗೌರವಾಧ್ಯಕ್ಷರಾದ ಶ್ರೀ ರಾಮಚಂದ್ರ ರಾವ್, ಕೋಶಾಧಿಕಾರಿ ಶ್ರೀ ರಘುಪತಿ ರಾವ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರ ಆಚಾರ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುರೇಶ ರಾವ್ ಇವರು ವಂದನಾರ್ಪಣೆಗೈದರು.