ಮಧ್ವನಗರ – ಕಲ್ಲಟ್ಟೆ – ಪಡುಬಿದ್ರಿ ಪೇಟೆ ನಡುವಿನ ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿಯ ಲೋಕಾರ್ಪಣೆ
ತರಂಗಿಣಿ ಮಿತ್ರ ಮಂಡಳಿಯ ಸತತ ಪರಿಶ್ರಮದಿಂದ ಸಾಕಾರಗೊಂಡ ಮಧ್ವನಗರ – ಕಲ್ಲಟ್ಟೆ – ಪಡುಬಿದ್ರಿ ಪೇಟೆ ನಡುವಿನ ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿಯನ್ನು ಪಡುಬಿದ್ರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ದಮಯಂತಿ ಅಮೀನ್ ಅವರು ಇಂದು ಲೋಕಾರ್ಪಣೆಗೈದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಸಾಲ್ಯಾನ್, ಹರೀಶ್ ಶೆಟ್ಟಿ, ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷರಾದ ರಮಾಕಾಂತ ರಾವ್, ಮತ್ತು ಮಂಡಳಿಯ ಹಿರಿಯರಾದ ಸುಧಾಕರ ರಾವ್, ಸದಾಶಿವ ಆಚಾರ್, ಲಕ್ಷ್ಮೀಕಾಂತ ರಾವ್, ಶ್ರೀಧರ ಆಚಾರ್, ಕೇಶವ ರಾವ್ ಮತ್ತಿತರರು ಉಪಸ್ಥಿತರಿದ್ದರು.