ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ 400ಕ್ಕೂ ಅಧಿಕ ಸೀಯಾಳ ಅಭಿಷೇಕ – ತಾ 2-6-2019

|| ಕಾಲೇ ವರ್ಷತು ಪರ್ಜನ್ಯ: ಪೃಥಿವೀ ಸಸ್ಯ ಶಾಲಿನೀ ದೇಶೋಯಂ ಕ್ಷೋಭ ರಹಿತೋ ಸಜ್ಜನಾ: ಸಂತು ನಿರ್ಭಯಾ ||

ಸಕಾಲಕ್ಕೆ ಮಳೆ ಬೆಳೆ ಆಗಿ ಸುಭೀಕ್ಷೆ ಆಗ ಬೇಕಾದರೆ ಭಗವಂತನ ಕೃಪೆ ಇರಲೇ ಬೇಕು. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾದ ತರಂಗಿಣಿ ಮಿತ್ರ ಮಂಡಳಿಯು ತಾ 2-6-2019 ನೇ ಭಾನುವಾರದಂದು ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ಸುಮಾರು 400ಕ್ಕೂ ಅಧಿಕ ಸೀಯಾಳ ಅಭಿಷೇಕ ಮಾಡಿಸಿದರು. ತರಂಗಿಣಿ ಮಿತ್ರಮಂಡಳಿಯ ಅಧ್ಯಕ್ಷ ರಮಾಕಾಂತ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಖಜಾಂಜಿ ರಘುಪತಿ ರಾವ್, ವಿಷ್ಣುಮೂರ್ತಿ ಆಚಾರ್, ಮುರಳೀನಾಥ್ ಶೆಟ್ಟಿ , ವಿಶುಕುಮಾರ್ ಶೆಟ್ಟಿ, ರಾಘವೇಂದ್ರ ನಾವಡ, ಸುಧಾ ಆರ್ ನಾವಡ, ಸುಧಾಕರ ರಾವ್, ಸದಾಶಿವ ಆಚಾರ್ ಹಾಗೂ ಮಂಡಳಿಯ ಸರ್ವಸದಸ್ಯರು ವಿಷ್ಣುಸಹಸ್ರನಾಮ ಪಾರಾಯಣವನ್ನು ಮಾಡಿ ಗ್ರಾಮದ ಸುಭಿಕ್ಷೆಗಾಗಿ ದೇವಳದ ಪ್ರಧಾನ ಅರ್ಚಕರಾದ ಪದ್ಮನಾಭರಾಯರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದರು.

Leave a Reply