ಉಡುಪಿ ಶ್ರೀ ಪೇಜಾವರ ಮಠದ ಅಧೀನದಲ್ಲಿರುವ, ಅನಾಥ ಗೋವುಗಳ ಆಶ್ರಯತಾಣವಾದ ನೀಲಾವರ ಗೋಶಾಲೆಗೆ ಪಡುಬಿದ್ರಿ ತರಂಗಿಣಿ ಮಿತ್ರ ಮಂಡಳಿ (ರಿ) ವತಿಯಿಂದ ಗೋವುಗಳಿಗೆ ಹಸಿಹುಲ್ಲನ್ನು ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀ ರಮಾಕಾಂತ ರಾವ್, ಗೌರವಾಧ್ಯಕ್ಷರಾದ ಸುರೇಶ ರಾವ್, ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ರಘುಪತಿ ರಾವ್, ಸಂಘದ ಸದಸ್ಯರುಗಳಾದ ಸುಧಾಕರ ರಾವ್, ರಾಜೇಶ ಉಪಾಧ್ಯಾಯ, ಪಿ ಕೆ ಚಂದ್ರಶೇಖರ ರಾವ್, ರಾಘವೇಂದ್ರ ರಾವ್, ಅಮರೇಂದ್ರ ಆಚಾರ್, ಗೋವಿಂದ ರಾವ್, ಕೇಶವ ರಾವ್, ಲಕ್ಷ್ಮೀಕಾಂತ ರಾವ್ ಹಾಗೂ ಇತರರು ಉಪಸ್ಥಿತರಿದ್ದರು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ಸದಾ ತೊಡಗಿಸಿಕೊಳ್ಳುತ್ತಿರುವ ತರಂಗಿಣಿ ಮಿತ್ರಮಂಡಳಿಯ ಈ ಸೇವೆಯು ಗೋಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.