ದೀಪಾವಳಿ – 2020

ದೀಪಾವಳಿ ಹಬ್ಬದ ಪ್ರಯುಕ್ತ ಅಮರೇಂದ್ರ ಆಚಾರ್ಯ ಅವರ ನೇತೃತ್ವದಲ್ಲಿ ಅವರ ಸ್ವಗೃಹದಲ್ಲಿ ಸಾಮೂಹಿಕ ದೀಪಾವಳಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಅನುಸಾರವಾಗಿ ಗಡಿ ಕಾಯುವ ವೀರ ಯೋಧರ ಗೌರವಾರ್ಥ 1 ವಿಶೇಷ ದೀಪವನ್ನು ಹಚ್ಚಿ ಹೂಗುಚ್ಛ ಇಟ್ಟು ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ಆನಂತರ ವಿಶೇಷ ಸುಡುಮದ್ದು ಪ್ರದರ್ಶನ ನೆರವೇರಿತು. ಕಾರ್ಯಕ್ರಮದಲ್ಲಿ  ಸುಧಾಕರ ರಾವ್, ಜಯಂತ್ ಪಿ ಎಚ್, ಅಭಿರಾಮ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಆಗಮಿಸಿದ್ದ ಎಲ್ಲರಿಗೂ ಅಮರೇಂದ್ರ ಆಚಾರ್ಯ ಅವರು ಸಿಹಿತಿಂಡಿ ವಿತರಿಸಿದರು.

IMG-20201115-WA0015IMG-20201115-WA0014

IMG-20201115-WA0013

Leave a Reply